Добавить
Уведомления

ಛಂದಸ್ಸು-ಮಾತ್ರೆಗಳು ಮತ್ತು ಗಣಗಳು | chandassu 10th grammer by BMK

ಛಂದಸ್ಸು ಛಂದಸ್ಸು-ಪೀಠಿಕೆ ಮಾತ್ರೆ-ಲಘು-ಗುರು ಛಂದಸ್ಸಿನ ಪ್ರಕಾರಗಳು ಛಂದಸ್ಸು-ಸಾರಾಂಶ ಛಂದಸ್ಸು-ಮಾತ್ರೆಗಳು ಮತ್ತು ಗಣಗಳು ಪದ್ಯಗಳನ್ನು ಹೇಗೆ ರಚಿಸಬೇಕು? ಅಲ್ಲಿ ಯಾವ ನಿಯಮಗಳನ್ನು ಕವಿಗಳು ಅನುಸರಿಸುತ್ತಾರೆ? ಎಂಬ ವಿಷಯವನ್ನು ತಿಳಿಯಬೇಕಾದರೆ ಅವಶ್ಯವಾಗಿ ಛಂದಶ್ಯಾಸ್ತ್ರದ ಪರಿಚಯ ಮಾಡಿಕೊಳ್ಳಬೇಕಾಗುವುದು. ನಮ್ಮ ವಿದ್ಯಾರ್ಥಿಗಳು ತಾವು ಓದುತ್ತಿರುವ ಕನ್ನಡ ಪಠ್ಯ ಪುಸ್ತಕಗಳಲ್ಲಿ ಅದೆಷ್ಟೋ ಬಗೆಯ ಪದ್ಯಗಳನ್ನು ಓದುತ್ತಾರೆ. ಆ ಎಲ್ಲ ಪದ್ಯಗಳನ್ನು ರಚನೆ ಮಾಡಿದ ಕವಿಗಳು ಹಲಕೆಲವು ನಿಯಮಗಳನ್ನನುಸರಿಸಿ ಆ ಪದ್ಯಗಳನ್ನು ರಚಿಸಿರುತ್ತಾರೆ. ಯಾವ ನಿಯಮವನ್ನು ಅನುಸರಿಸಿ ಈ ಪದ್ಯಗಳು ರಚಿತವಾಗಿವೆ, ಎಂಬುದನ್ನು ತಿಳಿಯದೆ ಅವುಗಳನ್ನು ಓದಿದರೆ ಸಾಕಾದಷ್ಟು ಪ್ರಯೋಜನವಾಗಲಿಕ್ಕಿಲ್ಲ. ಆದುದರಿಂದ ನಮ್ಮ ಮಕ್ಕಳು ಛಂದಶ್ಯಾಸ್ತ್ರದ ಸ್ಥೂಲವಾದ ಪರಿಚಯ ಮಾಡಿಕೊಳ್ಳಬೇಕಾ ಗುವುದು. ಈ ದೃಷ್ಟಿಯಿಂದ ಮುಂದೆ ಸಂಗ್ರಹವಾಗಿ ಈ ವಿಷಯವನ್ನು ತಿಳಿಸಲಾಗಿದೆ. ವ್ಯಾಕರಣ ಶಾಸ್ತ್ರವು ಗದ್ಯ ಪದ್ಯಗಳೆರಡಕ್ಕೂ ಸಂಬಂಧಿಸಿದ ಶಾಸ್ತ್ರವಾದರೆ, ಛಂದಸ್ಸು ಕೇವಲ ಪದ್ಯಗಳಿಗೆ ಮಾತ್ರ ಸಂಬಂಧಿಸಿದ ಶಾಸ್ತ್ರವಾಗಿದೆ. ನಾವು ಓದುವ ಪದ್ಯಗಳು ನಾನಾ ತರವಾಗಿವೆ. ಕೆಲವು ನಾಲ್ಕು ಸಾಲಿನವು, ಕೆಲವು ಆರು ಸಾಲಿನವು, ಕೆಲವು ಮೂರು ಸಾಲಿನವು, ಕೆಲವು ಸಾಲುಗಳು ಉದ್ದ, ಕೆಲವು ಚಿಕ್ಕವು. ಹೀಗೆ ನಾನಾ ಬಗೆಯು ಪದ್ಯಗಳಲ್ಲಿ ಕಂಡುಬರುತ್ತವೆ. ಅವುಗಳೆಲ್ಲವುಗಳ ಸ್ವರೂಪವನ್ನು ತಿಳಿಯದಿದ್ದರೂ ಮುಖ್ಯವಾದ ಕೆಲವು ಪದ್ಯಗಳ ರೀತಿನೀತಿ ಗಳನ್ನು ತಿಳಿಯಬೇಕು. ಪದ್ಯಗಳು ವಿಸ್ತಾರವಾದ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸಲೂ, ರಸವತ್ತಾದ ಅಂತಗಳನ್ನು ಸ್ವಾರಸ್ಯ ಮಾತುಗಳಿಂದ ವರ್ಣಿಸಲೂ, ಮತ್ತು ಅವುಗಳನ್ನು ಸುಲಭವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಲೂ ಅನುಕೂಲವಾದವು. ಅಲ್ಲದೆ ರಾಗವಾಗಿ ಹಾಡಿ, ತಾವೂ ಆನಂದ ಪಡಬಹುದು. ಇತರರನ್ನೂ ಆನಂದಗೊಳಿಸಬಹುದು. ಇಂಥ ಮಹತ್ವದ ಕಾವ್ಯಭಾಗಗಳಾದ ಪದ್ಯಗಳ ರಚನಾಕ್ರಮದ ಬಗೆಗೆ ಲಕ್ಷಣವನ್ನು ತಿಳಿಸುವ ಗ್ರಂಥವೆಂದರೆ ಮುಖ್ಯವಾಗಿ ‘ಛಂದೋಂಬುಧಿ‘ ಎಂಬುದು. ಇದು ಹಳಗನ್ನಡ ಪದ್ಯಗಳಲ್ಲಿ ರಚಿಸಲ್ಪಟ್ಟಿದೆ. ಇದೇ ಕನ್ನಡ ಛಂದಸ್ಸನ್ನು ವಿಶದವಾಗಿ ತಿಳಿಸುವ ಗ್ರಂಥವಾಗಿದೆ. ಮಾತ್ರೆ, ಗುರು, ಲಘುಗಳು ಮಾತ್ರೆ:- ಅ ಎಂಬ ಅಕ್ಷರವನ್ನು ನಾವು ಎಳೆಯದಂತೆ, ಮೊಟಕುಗೊಳಿಸದಂತೆ ಉಚ್ಚಾರ ಮಾಡುವುದಕ್ಕೆ ಬೇಕಾಗುವ ಕಾಲವೇ ಒಂದು ಮಾತ್ರಾ ಕಾಲ. ಒಂದು ಮಾತ್ರಾಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ ಲಘುಗಳೆನಿಸುವುವು. ಲಘುವನ್ನು ‘U' ಹೀಗೆ ಗುರುತಿಸುವುದು ವಾಡಿಕೆ. ಉದಾಹರಣೆಗೆ:- U U U U U U ಅ ಇ ಉ ಋ ಎ ಒ U U U U U U ಕ ಕಿ ಕು ಚ ಟ ತ U U U U U U ಕೆ ಕೊ ಸು ಸೊ ಸೃ ಕೃಮೇಲೆ ಹ್ರಸ್ವಸ್ವರ ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಾದುದರಿಂದ ಅವುಗಳ ಮೇಲೆ ಹೀಗೆ ಗುರುತು ಮಾಡಿದೆ. ಗುರುಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೆಲ್ಲ ಗುರುಗಳೆನಿಸುವುವು. ಗುರುಗಳಾಗಿರುವ ಅಕ್ಷರಗಳ ಮೇಲೆ ಹೀಗೆ ಗುರುತಿಸುವುದು ವಾಡಿಕೆ. ಗುರುಗಳಾಗುವ ಅಕ್ಷರಗಳು:- ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ವ್ಯಂಜನಾಕ್ಷರದ ಹಿಂದಿನ ಅಕ್ಷರ ಷಟ್ಪದಿ ಪದ್ಯಗಳಲ್ಲಿ ಬರುವ ೩ನೆಯ ೬ನೆಯ ಸಾಲಿನ ಕೊನೆಯಲ್ಲಿರುವ ಅಕ್ಷರ (ಲಘುವಾಗಿದ್ದರೂ) ಗುರುಗಳೆನಿಸುವುವು. ಉದಾಹರಣೆಗೆ: (i) ದೀರ್ಘಸ್ವರಾಕ್ಷರಗಳು ಗುರುಗಳಾಗುವುದಕ್ಕೆ- — — — — — — — ಆ ಈ ಊ ೠ ಏ ಐ ಓ(ii) ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು- — — — — — — — — ಕಾ ಕೀ ಚೇ ಚೈ ಸೈ ನಾ ರೋ ಸೌ — — — — — — — ಕ್ಕಾ ಸ್ನೇ ತ್ರೇ ಪ್ರೈ ಕ್ರೋ ಧ್ಯಾ ಲೋ iii) ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು- — — — — — — — ಅಂ ಅಃ ತಂ ತಃ ಸಂ ಸಃ ಕಂ (iv) ಒತ್ತಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ- —U —U —U —UU ಕಲ್ಲು ಮಣ್ಣು ನಿಲ್ಲು ಮೆತ್ತಗೆ (ಇಲ್ಲಿ ಒತ್ತಕ್ಷರದ ಹಿಂದಿನ ಅಕ್ಷರಗಳು ಗುರುಗಳಾಗಿದ್ದು, ಉಳಿದವು ಲಘುವಾಗಿದ್ದರೆ ಲಘು ಚಿಹ್ನೆಯನ್ನೂ ಗುರುವಾಗಿದ್ದರೆ ಗುರು ಚಿಹ್ನೆಯನ್ನೂ ಹಾಕಬೇಕು) (v) ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ- — — — — — — — — ಕಲ್ ನಿಲ್ ಪಣ್ ತಿನ್ ಮೇಣ್ ಕಾಲ್ ಮೇಲ್ ತಾಯ್ಮೇಲೆ (vi) ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ, ವಾರ್ಧಕ-ಇತ್ಯಾದಿ ಆರು ಜಾತಿಯ ಷಟ್ಪದಿ ಪದ್ಯಗಳಲ್ಲಿ ಬರುವ ಮೂರನೆಯ, ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೆ ಗುರು ಅಕ್ಷರವೆಂದು ಭಾವಿಸಬೇಕು. ಕಂದ ಪದ್ಯ ಮಾತ್ರಾಗಣಗಳು ಎಂದರೆ ಮೂರು, ನಾಲ್ಕು, ಐದು ಮಾತ್ರೆಗಳು ಗುಂಪುಗಳ ಲೆಕ್ಕವಿಟ್ಟುಕೊಂಡು ವಿಭಾಗಿಸುವ ಗಣಗಳು ಮಾತ್ರಾಗಣಗಳೆನಿಸುವುದೆಂದು ಈ ಹಿಂದೆ ವಿವರಿಸಿದೆ. ಪದ್ಯದಲ್ಲಿನ ಸಾಲುಗಳನ್ನು ಗುರುಲಘುಗಳಿಂದ ಗುರುತಿಸಿದ ಮೇಲೆ ಗುರುವಿಗೆ ಎರಡು ಮಾತ್ರೆ, ಮತ್ತು ಲಘುವಿಗೆ ಒಂದು ಮಾತ್ರೆಯ ಲೆಕ್ಕಹಾಕಿ ಮೂರು, ನಾಲ್ಕು, ಐದು ಮಾತ್ರೆಗಳ ಗುಂಪುಗಳನ್ನು ಒಂದೊಂದು ಗಣವಾಗಿ ವಿಂಗಡಿಸುವ ಗಣಗಳೆಲ್ಲ ಮಾತ್ರಾಗಣಗಳೆನಿಸುವುವು. ಪದ್ಯಗಳ ಸಾಲುಗಳ ಅಕ್ಷರಗಳಿಗೆ ಗುರುಲಘುಗಳ ಗುರುತುಮಾಡುವುದಕ್ಕೆ ಪ್ರಸ್ತಾರ ಎಂದು ಹೆಸರು. ಮಾತ್ರಾಗಣಗಳಿಂದ ಕೂಡಿದ ಪದ್ಯಜಾತಿಗಳೆಂದರೆ-ಕಂದ, ಷಟ್ಪದಿಗಳು, ರಗಳೆ ಮೊದಲಾದವುಗಳು. ಈಗ ಒಂದೊಂದಾಗಿ ಮಾತ್ರಾಗಣದ ಪದ್ಯಗಳ ಲಕ್ಷಣವನ್ನು ತಿಳಿಯಿರಿ. (೧) ಕಂದ ಪದ್ಯದ ಲಕ್ಷಣ ಕಂದ || ಮೇಲಿನ ಈ ಕಂದ ಪದ್ಯಕ್ಕೆ ಪ್ರಸ್ತಾರ ಹಾಕಿ ಗಣಗಳನ್ನು (ಮಾತ್ರಾಗಣಗಳನ್ನು) ವಿಂಗಡಿಸಿದೆ. ಈ ಪದ್ಯದಲ್ಲಿ ಮೂರು ಮಾತ್ರೆಯ ಅಥವಾ ಐದು ಮಾತ್ರೆಯಗಣಗಳನ್ನು ವಿಂಗಡಿಸಲು ಬರುವಂತಿಲ್ಲ. ಇದರಲ್ಲಿ ನಾಲ್ಕು ನಾಲ್ಕು ಮಾತ್ರೆಯ ಗಣಗಳನ್ನೇ ವಿಂಗಡಿಸಬೇಕು. ರಗಳೆ ‘ರಗಳೆ’ ಎಂಬುದು ‘ರಘಟಾ’ ಎಂಬ ಸಂಸ್ಕೃತ ಶಬ್ದದ ತದ್ಭವ ಪದ. ಕನ್ನಡದಲ್ಲಿ ಸಾಮಾನ್ಯವಾಗಿ ಉತ್ಸಾಹರಗಳೆ, ಮಂದಾನಿಲರಗಳೆ, ಲಲಿತರಗಳೆ ಎಂದು ಮೂರು ವಿಧವಾದ ರಗಳೆಗಳು ಪ್ರಸಿದ್ಧವಾಗಿವೆ. ರಗಳೆಯ ಪದ್ಯಗಳಲ್ಲಿ ಇದುವರೆಗೆ ಹೇಳಿದ ನಾಲ್ಕು ಅಥವಾ ಆರು ಸಾಲುಗಳ ಪದ್ಯಗಳಂತೆ, ಇಷ್ಟೇ ಸಾಲುಗಳಿರಬೇಕೆಂಬ ನಿಯಮವೇ ಇಲ್ಲ. ಎಷ್ಟು ಬೇಕಾದರೂ ಸಾಲುಗಳು ಹಾಗೆಯೇ ಬೆಳೆಯುತ್ತ ಹೋಗಬಹುದು. ಆದರೆ ಎಲ್ಲ ಸಾಲುಗಳೂ ಸಮಾನವಾದ ಮಾತ್ರಾಗಣಗಳಿಂದ ಕೂಡಿರುತ್ತವೆ. ಮತ್ತು ಎರಡೆರಡು ಸಾಲುಗಳಲ್ಲಿ ಪ್ರಾಸದ ನಿಯಮವಿರು ತ್ತದೆ. ಅಂತ್ಯಪ್ರಾಸವೂ ಇರುವುದುಂಟು. (೧೧೪) ಎರಡೆರಡು ಸಾಲುಗಳಲ್ಲಿ ಪ್ರಾಸನಿಯಮವಿಟ್ಟುಕೊಂಡು ಮೂರು ಮಾತ್ರೆಯ ನಾಲ್ಕು ಗಣಗಳ ಗಣನಿಯಮದಿಂದ ಸಾಲುಗಳ ನಿಯಮವಿಲ್ಲದೆ ಇರುವ ಪದ್ಯ ಜಾತಿಯೇ ಉತ್ಸಾಹರಗಳೆಯೆನಿಸುವುದು. ಷಟ್ಟದಿ ಆರು ಜಾತಿಯ ಷಟ್ಪದಿಗಳ ಲಕ್ಷಣಗಳನ್ನು ಕ್ರಮವಾಗಿ ತಿಳಿಯೋಣ. (ಷಟ್=ಆರು, ಪದಿ=ಪಾದಗಳುಳ್ಳದ್ದು ಎಂದು ಅರ್ಥ). ಭಾಮಿನೀ ಷಟ್ಪದಿ

12+
16 просмотров
2 года назад
4 января 2024 г.

, чтобы оставлять комментарии